1966ರಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಚಂದಾಫುರದ ಶ್ರೀ ತಿಮ್ಮರಾಯರೆಡ್ಡಿರವರು ನೀಡಿದ ಸರ್ವೆ ನಂ. 78ರ 15 ಗುಂಟೆ ಜಮೀನಿನಲ್ಲಿ ಶ್ರೀ ಸಿದ್ದಗಂಗಾ ಮಠದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಅಮೃತ ಹಸ್ತದಿಂದ ಶಂಕು ಸ್ಥಾಪನೆ ಮಾಡಿಸಿ 4 ಕೊಠಡಿಗಳನ್ನು ನಿಮಾ೯ಣ ಮಾಡಲಾಯಿತು. ಆರಂಭದಲ್ಲಿ ಕೇವಲ 63 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಆರಂಭವಾದ ಶಾಲೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರತೊಡಗಿ, ಈಗ ಪ್ರಸ್ತುತ 21 ಕೊಠಡಿಗಳನ್ನು ಒಳಗೊಡಿದ್ದು ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸುಮಾರು 586 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ದೃಷ್ಠಿ ಪ್ರೌಢಶಾಲಾ ಹಂತದಲ್ಲಿ ಗ್ತಾಮೀಣ ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ, ಭೌತಿಕ, ಆಧ್ಯಾತ್ಮಿಕ ಹಾಗೂ ಸೃಜನಾತ್ಮಕ ಸಾಮರ್ಥ್ಯವನ್ನು ಬೆಳೆಸುತ್ತಾ ಉತ್ತಮ ಶಿಕ್ಷಣವನ್ನು ಒದಗಿಸುವುದಾಗಿದೆ.
ಪ್ರತಿಯೊಬ್ಬರಿಗು ವೈಯಕ್ತಿಕವಾಗಿ ಜ್ಞಾನ ನೀಡುವುದು ಹಾಗೂ ಯಾವುದೇ ಜಾತಿಭೇದವಿಲ್ಲದೆ ಭಾರತೀಯ ನಾಗರೀಕರಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದಾರೆ. ಇಂತಹ ಮಹನೀಯ ಸರ್ವಶ್ರೇಷ್ಠ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ನಮ್ಮ ಸಂಸ್ಥೆ ದಾರಿದೀಪವಾಗಿದ.
ದಿನಾಂಕ: ೨೧/೦೬/೨೦೨೧ರಂದು ವಿಶ್ವ ಯೋಗ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಯಿತು.
ದಿನಾಂಕ: ೦೫/೦೬/೨೦೨೧ ರಂದು ಶಾಲೆಯ ಮುಖ್ಯಶಿಕ್ಷಕರು ಸಿಬ್ಬಂದಿಯವರ ಜೊತೆ ಗಿಡವನ್ನು ನೆಡುವುದರ ಮೂಲ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ದಿನಾಂಕ: ೦೬/೦೧/೨೦೨೧ರಂದು ನಮ್ಮ ಶಾಲೆಯಲ್ಲಿ ಸಿಬ್ಬಂದಿಯವರಿಗೆ ಕೋವಿಡ್ ೧೯ ಟೆಸ್ಟ್ನ್ನು ಮಾಡಿಸಲಾಯಿತು.