ನಮ್ಮ ಶಾಲೆ ಬಗ್ಗೆ

ನಮ್ಮ ಬಗ್ಗೆ

1963ಕ್ಕೆ ಮೊದಲು ಚಂದಾಫುರ ಗ್ರಾಮದ ಸುತ್ತಮುತ್ತಲಿನ ಪ್ತದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಗ್ರಾಮೀಣ ಮಕ್ಕಳಿಗೆ ಪ್ರೌಢಶಾಲಾ ವ್ಯಾಸಂಗದ ಅನುಕೂಲತೆ ಹತ್ತಿರದಲ್ಲಿ ಎಲ್ಲಿಯೊ ಇಲ್ಲದ್ದನ್ನು ಕಂಡ ಸ್ಥಳೀಯ ರೈತಾಪಿ ಶಿಕ್ಷಣಾಭಿಮಾನಿಗಳು ದಿನಾ೦ಕ : 07-06-1963ರಲ್ಲಿ ಚಂದಾಫುರದ ಶ್ರೀ ಕೊದಂಡ ರಾಮ ದೇವರ ಸನ್ನಿಧಿಯಲ್ಲಿ ಡಾ|| ಎನ್. ರಾಜಪ್ಪ ಎ೦.ಬಿ.ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಶಿಕ್ಷಣ ಸಂಸ್ಥೆಯ ರೂಫುರೇಷೆಗಳನ್ನು ಸಿದ್ದಪಡಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಚಂದಾಫುರದ ಶ್ರೀ ತಿಮ್ಮರಾಯರೆಡ್ಡಿರವರು, ಕಾಯ೯ದರ್ಶಿಗಳಾಗಿ ತಿರುಮಗೊರಿಡನಹಳ್ಳಿಯ ಶ್ರೀ ಪಟೇಲ್ ಬಿಡ್ಡಾರೆಡ್ಡಿ ರವರು, ಖಜಾ೦ಚಿಗಳಾಗಿ ರಾಮಸಾಗರದ ಶ್ರೀ ಹೆಚ್. ತಿಮ್ಮಯಲಿರೆಡ್ಡಿರವರು, ಉಪಾಧ್ಯಕ್ಷರಾಗಿ ರಾಮಸಾಗರದ ಪಿ. ವೆಂಕಟರಮಣ ರೆಡ್ಡಿರವರು, ಸದಸ್ಯರಾಗಿ ಬನಹಳ್ಳಿಯ ಶ್ರೀ ನಂಚಾರೆಡ್ಡಿ. ಹೀಲಲಿಗೆಯ ಶ್ರೀ ವರ್ತಕೆ. ಸೂಯ೯ನಾರಾಯಣರಾವ್ ಮತ್ತು ಶ್ರೀ ಬೌಡರೆಡ್ಡಿ, ಚಂದಾಫುರದ ಶ್ರೀ ಕೆ. ಮುನಿರೆಡ್ಡಿ, ಇಗ್ಗೆಲೂರಿನ ಎ. ಪಾಪರೆಡ್ಡಿ ಮತ್ತು ಡಿ. ಮುನಿಸ್ಥಾಮಪ್ಪ, ಕಿತ್ತಗಾನಹಳ್ಳಿಯ ಶ್ರೀ ಬಿ. ನಂಚಾರೆಡ್ಡಿ, ಕಾಚನಾಯಕನಹಳ್ಳಿಯ ಶ್ರೀ ವೆಂಕೆಟರಮಣರೆಡ್ಡಿ, ಲಕ್ಷ್ಮಿಸಾಗರದ ಶ್ರೀ ಪೀರಾರೆಡ್ಡಿ, ಬೊಮ್ಮಸಂದ್ರ ಗ್ರಾಮದ, ಶ್ರೀ ಬಿ.ಎನ್. ವೆಂಕಟರಮಣರೆಡ್ಡಿ ಈ ಗಣ್ಯ ಮಹಾಶಯರನ್ನು ಸವಾ೯ನುಮತದಿಂದ ಅಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಮಸಾಗರದ ಶ್ರೀ ಅರ್. ತಿಮಾಹ್ರಿರೆಡ್ಡಿ ಬಿ.ಎ. ರವರು ಸಂಸ್ಥೆಯ ವರದಿಗಾರರಾಗಿ ಆಗಿ ಕಾಯ೯ ನಿವ೯ಹಿಸಿದರು. ಸದರಿ ಸಂಸ್ಥೆಯ ಅಡಿಯಲ್ಲಿ ದಿನಾಂಕ : 12.06.1963 ರಂದು ಕನಾ೯ಟಕ ಸಕಾ೯ರದ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಸ್ಥಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆಯನ್ನು ಸ್ಥಾಪಿಸಲಾಯಿತು.

1966ರಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಚಂದಾಫುರದ ಶ್ರೀ ತಿಮ್ಮರಾಯರೆಡ್ಡಿರವರು ನೀಡಿದ ಸರ್ವೆ ನಂ. 78ರ 15 ಗುಂಟೆ ಜಮೀನಿನಲ್ಲಿ ಶ್ರೀ ಸಿದ್ದಗಂಗಾ ಮಠದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಅಮೃತ ಹಸ್ತದಿಂದ ಶಂಕು ಸ್ಥಾಪನೆ ಮಾಡಿಸಿ 4 ಕೊಠಡಿಗಳನ್ನು ನಿಮಾ೯ಣ ಮಾಡಲಾಯಿತು. ಕೇವಲ ಆರಂಭದಲ್ಲಿ 63 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಆರಂಭವಾದ ಶಾಲೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರತೊಡಗಿ, ಈಗ ಪ್ರಸ್ತುತ 21 ಕೊಠಡಿಗಳನ್ನು ಒಳಗೊಂಡಿದ್ದು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸುಮಾರು 586 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನಮ್ಮ ಸಂಸ್ಥೆಯನ್ನು ಏಕೆ ಆರಿಸಬೇಕು?

ಸ್ವಾಮಿ ವಿವೇಕಾನಂದ ಗ್ರಾಮೀಣ ಶಿಕ್ಷಣ ಸಂಘವು ಲೋಕೋಪಕಾರದಿಂದ ನಡೆಸಲ್ಪಡುವ ಲಾಭರಹಿತ ಸಂಸ್ಥೆಯಾಗಿದೆ ಚಂದಾಫುರದ ಸುತ್ತಮುತ್ತಲಿನ ಹಳ್ಳಿಗಳಿಂದ ಕೃಷಿ ಸಮುದಾಯದ ವ್ಯಕ್ತಿಗಳು.

ನಮ್ಮ ದೃಷ್ಟಿಕೋನ

ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ದೃಷ್ಟಿ ಪ್ರೌಢಶಾಲಾ ಹಂತದಲ್ಲಿ ಗ್ತಾಮೀಣ ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ, ಭೌತಿಕ, ಆಧ್ಯಾತ್ಮಕ ಹಾಗೂ ಸೃಜನಾತ್ಮಕ ಸಾಮರ್ಥ್ಯವನ್ನು ಬೆಳೆಸುತ್ತಾ ಉತ್ತಮ ಶಿಕ್ಷಣವನ್ನು ಒದಗಿಸುವುದಾಗಿದೆ.

ನಮ್ಮ ಪ್ರೇರಣೆ

ಪ್ರತಿಯೊಬ್ಬರಿಗು ವೈಯಕ್ತಿಕವಾಗಿ ಜ್ಞಾನ ನೀಡುವುದು ಹಾಗೂ ಯಾವುದೇ ಜಾತಿಭೇದವಿಲ್ಲದೆ ಭಾರತೀಯ ನಾಗರೀಕರಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದಾರೆ.

ನಮ್ಮ ಧ್ಯೇಯ

ಸಮಾಜ ಮತ್ತು ದೇಶದ ಹಿತದೃಷ್ಠಿಯಿಂದ ಇಂದಿನ ಯುವ ಪೀಳಿಗೆಗೆ ತಮ್ಮ ಸಂತೋಷದಾಯಕ ಮತ್ತು ರಚನಾತ್ಮಕ ಜೀವನ ನಡೆಸಲು ಉನ್ನತ ಶಿಕ್ಷಣ ಮತ್ತು ಅತ್ಯಗತ್ಯ ಕೌಶಲ್ಯಗಳನ್ನು ಪಡೆಯಲು ಪ್ರೇರಣೆ ಮತ್ತು ತರಬೇತಿ ನೀಡುವುದು.